ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಉಚಿತ ಗ್ಯಾಸ್ ಸ್ಟವ್ ಜೊತೆಗೆ ಸಿಲಿಂಡರ್ ಕೂಡ ಫ್ರೀ! ₹300 ಸಬ್ಸಿಡಿ ಸಿಗಲಿದೆ! Gas Cylinder & Stove Subsidy
ಉಚಿತ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್: ನಮ್ಮ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಎಷ್ಟು ದುಬಾರಿಯಾಗಿದೆ ಎಂದು ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಇದು ಶ್ರೀಮಂತರಿಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಸುದ್ದಿಯಲ್ಲ, ಆದರೆ ಮಧ್ಯಮ ವರ್ಗದ ಮಹಿಳೆಯರಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ವಿಷಯವೇ ಸರಿ. ಏಕೆಂದರೆ ಯಾವುದಾದರೂ ಒಂದು ಗೃಹ ಬಳಕೆ ವಸ್ತುವಿನ ಬೆಲೆ ಗಗನಕೇರಿದ್ದರೆ ಬಡ ಮತ್ತು ಮಾಧ್ಯಮ ಕುಟುಂಬಗಳು ಮೇಲೆ ಒಂದು ದೊಡ್ಡ ಹೊರೆ ಇಟ್ಟಂತೆ ಆಗುತ್ತದೆ. ಅದೇ ರೀತಿ ಈಗ ಗ್ಯಾಸ್ ಸಿಲಿಂಡರ್ ಬೆಳೆಯು ಕೂಡ ಕಳೆದ ಸುಮಾರು ವರ್ಷಗಳಿಂದ ದುಬಾರಿಯಾಗಿದ್ದು.
ಈ ಗ್ಯಾಸ್ ಸಿಲಿಂಡರ್ ದುಬಾರಿಯಾಗಿರುವ ಕಾರಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಈಗ ಒಂದು ಹೊಸ ಯೋಜನೆಯನ್ನು ಜಾರಿಗೊಳಿಸಿದ ಸ್ನೇಹಿತರೆ. ಆ ಯೋಜನೆಯ ಹೆಸರು ಉಜ್ವಲ 2.0 ಯೋಜನೆ, ಹೌದು ಸ್ನೇಹಿತರೆ ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಒಂದು ಬೆಳಕಾಗಿ ಪರಿಣಮಿಸಿದೆ ಎಂದು ಹೇಳಬಹುದು. ಏಕೆಂದರೆ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಸಬ್ಸಿಡಿ ಬೆಲೆಯಲ್ಲಿ ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬಹುದು.
ಈ ಯೋಜನೆಗೆ ಯಾವೆಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು? ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಅದೇ ರೀತಿ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಕಡ್ಡಾಯ? ಈ ಯೋಜನೆಯ ಮುಖ್ಯ ಉದ್ದೇಶವೇನು? ಈ ಯೋಜನೆ ಅಡಿಯಲ್ಲಿ ಸಬ್ಸಿಡಿ ಎಷ್ಟು ಸಿಗಲಿದೆ? ಈ ಎಲ್ಲಾ ಮಾಹಿತಿಗಳನ್ನು ನಿಮಗೆ ಒಂದೊಂದಾಗಿ ಸಂಪೂರ್ಣವಾಗಿ ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಪೂರ್ತಿಯಾಗಿ ಓದಿ ವಿವರ ತಿಳಿದುಕೊಳ್ಳಿ.
ಈ ಯೋಜನೆಯ ಮುಖ್ಯ ಉದ್ದೇಶವೇನು?
ಸ್ನೇಹಿತರೆ ಪಿಎಂ ಉಜ್ವಲ 2.0 ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದಂತಹ ವರ್ಗಗಳ ಮಹಿಳೆಯರಿಗೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಉಚಿತವಾಗಿ ನೀಡುವುದು. ಮತ್ತು ಅವರಿಗೆ ಅವರು ಗ್ಯಾಸ್ ಸಿಲಿಂಡರನ್ನು ತುಂಬಿಸಿಕೊಳ್ಳುವ ಆಗಿಲ್ಲ ಸುಮಾರು ₹300 ಸಬ್ಸಿಡಿಯನ್ನು ಕೂಡ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ ಸ್ನೇಹಿತರೆ. ಇದರಿಂದಾಗಿ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಲಿದೆ. ಇದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು?
ಪಿಎಂ ಉಜ್ವಲ 2.0 ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗಿನ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು:
- ಮೊದಲನೇದಾಗಿ ಅರ್ಜಿ ಸಲ್ಲಿಸುವ ಮಹಿಳೆಯು ನಮ್ಮ ಭಾರತದ ಕಾಯಂ ನಿವಾಸಿ ಆಗಿರಬೇಕು.
- ಹಾಗೆ ಮಹಿಳೆಯರ ವಯಸ್ಸು 18 ವರ್ಷದಿಂದ 60 ವರ್ಷದ ಒಳಗಿನವರ ಆಗಿರಬೇಕು.
- ಮಹಿಳೆಯು ಈ ಹಿಂದೆ ಯಾವುದೇ ರೀತಿಯಾದಂತಹ ಗ್ಯಾಸ್ ಕನೆಕ್ಷನ್ ಹೊಂದಿರಬಾರದು.
- ಒಂದು ಕುಟುಂಬಕ್ಕೆ ಕೇವಲ ಒಬ್ಬ ಮಹಿಳೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ಬಳಿ ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಇರುವುದು ಕಡ್ಡಾಯ.
ಸಬ್ಸಿಡಿ ಎಷ್ಟು ಸಿಗಲಿದೆ?
ಸ್ನೇಹಿತರೆ ಈ ಒಂದು ಪಿಎಂ ಉಜ್ವಲ 2.0 ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಮಹಿಳೆಯರಿಗೆ ಅವರು ತಮ್ಮ ಗ್ಯಾಸ್ ಸಿಲಿಂಡರನ್ನು (ಮರುಪೂರಣ) ಮಾಡಿಸುವ ಪ್ರತಿ ಸಲವು ಅವರ ಖಾತೆಗೆ ₹300 ರೂಪಾಯಿ ಸಬ್ಸಿಡಿ ತಾಣ ಜಮಾ ಆಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಆಧಾರ್ ಕಾರ್ಡ್ (APL/BPL)
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ
- ಇತ್ತೀಚಿಗೆ ತೆಗೆಸಿದ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲನೇ ವಿಧಾನ ಆನ್ಲೈನ್ ನಲ್ಲಿ:
- ನೀವು ಈ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲನೆಯದಾಗಿ ನೀವು ಅಧಿಕೃತ pmuy.gov.in ವೆಬ್ ಸೈಟಿಗೆ ಭೇಟಿ ನೀಡಬೇಕು.
- ನಂತರ ಅಲ್ಲಿ ನಿಮಗೆ ಕಾಣುವಂತಹ “Apply for New Ujjwal a 2.0” ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
- ಇದಾದ ಮೇಲೆ ಅಲ್ಲಿ ನಿಮಗೆ ನಿಮ್ಮ ಎಲ್ಲಾ ವಿವರಗಳನ್ನು ಕೇಳುತ್ತದೆ ನೀವು ನಿಮ್ಮ ಎಲ್ಲಾ ವಿವರಗಳನ್ನು ತಪ್ಪದೇ ಸಂಪೂರ್ಣವಾಗಿ ಭರ್ತಿ ಮಾಡಿ.
- ಇದಾದ ನಂತರ ಈಗ ನಿಮಗೆ ಯಾವ ಕಂಪನಿಯ ಗ್ಯಾಸ್ ಬೇಕು ಎಂದು ಕೇಳುತ್ತದೆ. ನೀವು (HP, Indane, Bharath Gas) ಈ ಮೂರು ಗ್ಯಾಸ್ ಕಂಪನಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ಅಲ್ಲಿ ನಿಮಗೆ ನಿಮ್ಮ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳುತ್ತದೆ. ಈಗ ನೀವಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಳ್ಳಿ.
- ಈಗ ನಿಮ್ಮ ಅರ್ಜಿಯನ್ನು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಸಲ್ಲಿಸಿ.
ಎರಡನೇ ವಿಧಾನ ಆಫ್ ಲೈನ್ನಲ್ಲಿ:
- ನೀವು ಆಫ್ಲೈನ್ನಲ್ಲಿ ಈ ಪಿಎಂ ಉಜ್ವಲ 2.0 ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ. ಮೊದಲನೆಯದಾಗಿ ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ತೆರಳಿ ನಂತರ ಅಲ್ಲಿ ಪಿಎಂ ಉಜ್ವಲ 2.0 ಯೋಜನೆಯ ಅರ್ಜಿ ನಮೂನೆಯನ್ನು ಹೇಳಿ ಪಡೆದುಕೊಳ್ಳಿ.
- ಇದಾದ ನಂತರ ಆರ್ಜಿಯಲ್ಲಿ ನಿಮಗೆ ಕೇಳುವುದಿಲ್ಲ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
- ಈಗ ನಿಮ್ಮ ಅರ್ಜಿಯ ಜೊತೆಗೆ ಅದಕ್ಕೆ ಬೇಕಾದ ಎಲ್ಲಾ ನಿಮ್ಮ ದಾಖಲೆಗಳನ್ನು ಅಂಟಿಸಿ. ಇದಾದ ಮೇಲೆ ಅಲ್ಲಿ ನಿಮಗೆ ನಿಮ್ಮ ಗ್ರಾಮ ಪಂಚಾಯಿತಿಯ ಮುಖ್ಯಸ್ಥರಿಗೆ ಅರ್ಜಿ ನಮೂನೆಯನ್ನು ನೀಡಿ.
ಇದಾದ ಮೇಲೆ 30 ರಿಂದ 40 ದಿನಗಳ ಒಳಗೆ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಂತರ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಇದಾದ ಮೇಲೆ ನಿಮಗೆ ಗ್ಯಾಸ್ ಸಿಲಿಂಡರನ್ನು ಒದಗಿಸಲಾಗುತ್ತದೆ.