Free Sewing Machion Scheme: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ
ಈಗ ಸ್ನೇಹಿತರೇ ಕೇಂದ್ರ ಸರ್ಕಾರದಿಂದ ಮಹಿಳೆಯರು ಹಾಗೂ ಸ್ವಂತ ಉದ್ಯೋಗ ಆರಂಭಿಸಲು ಬಯಸುವವರಿಗೆ ಒಂದು ದೊಡ್ಡ ಸಿಹಿ ಸುದ್ದಿ ಬಂದಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರು ಮನೆಯಲ್ಲೇ ಕುಳಿತು ಸ್ವಾವಲಂಬಿ ಜೀವನ ನಡೆಸಲು ಸಹಾಯವಾಗುವಂತಹ ಉಚಿತ ಹೊಲಿಗೆ ಯಂತ್ರ ಯೋಜನೆ ಇದೀಗ ಜಾರಿಗೆ ಬಂದಿದೆ.

ಹೌದು ಸ್ನೇಹಿತರೇ, ಈ ಯೋಜನೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಜಾರಿಯಾಗಿದ್ದು, ಅರ್ಹ ಫಲಾನುಭವಿಗಳಿಗೆ ₹15,000 ವರೆಗೆ ಉಚಿತ ಟೂಲ್ ಕಿಟ್ ಸಹಾಯ, ಕೌಶಲ್ಯ ತರಬೇತಿ, ಹಾಗೂ ₹3 ಲಕ್ಷದವರೆಗೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ನೀವು ಹೊಲಿಗೆ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರೆ ಅಥವಾ ಈಗಾಗಲೇ ಹೊಲಿಗೆ ಕೆಲಸ ಮಾಡುತ್ತಿದ್ದರೆ, ಈ ಯೋಜನೆ ನಿಮಗಾಗಿ ಒಂದು ಸುವರ್ಣಾವಕಾಶ. ಈ ಲೇಖನದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಏನು, ಯಾರು ಅರ್ಜಿ ಸಲ್ಲಿಸಬಹುದು, ಉಚಿತ ಹೊಲಿಗೆ ಯಂತ್ರ ಹೇಗೆ ಪಡೆಯುವುದು ಮತ್ತು ಅರ್ಜಿ ಪ್ರಕ್ರಿಯೆ ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪಿಎಂ ವಿಶ್ವಕರ್ಮ ಯೋಜನೆ ಮಾಹಿತಿ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶದಲ್ಲಿನ ಪಾರಂಪರಿಕ ವೃತ್ತಿಗಳು ಮತ್ತು ಕೈಗಾರಿಕೆಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ದರ್ಜೀ, ಕುಂಬಾರ, ಕಾರ್ಪೆಂಟರ್, ಕಮ್ಮಾರ, ಚರ್ಮಕಾರ, ಹೊಲಿಗೆ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಹಲವು ವೃತ್ತಿಗಳವರಿಗೆ ಈ ಯೋಜನೆ ಪ್ರಯೋಜನಕಾರಿಯಾಗಿದೆ.
-
ಈಗ ಈ ಯೋಜನೆ ಉದ್ದೇಶ ಏನು ಎಂದರೆ ಪಾರಂಪರಿಕ ವೃತ್ತಿಗಳಿಗೆ ಆರ್ಥಿಕ ಬೆಂಬಲ ನೀಡುವುದು. ಹಾಗೆ ಕೌಶಲ್ಯ ವೃದ್ಧಿಗೆ ತರಬೇತಿ ಮತ್ತು ಆಧುನಿಕ ಉಪಕರಣಗಳ ಮೂಲಕ ಉದ್ಯೋಗಾವಕಾಶ ನೀಡುವುದು. ಅದೇ ರೀತಿಯಾಗಿ ಸ್ವಂತ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನಿಡಲಾಗುತ್ತದೆ.
ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ?
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಅರ್ಹ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ 7 ದಿನಗಳ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ವೃತ್ತಿಗೆ ಸಂಬಂಧಿಸಿದ ತಾಂತ್ರಿಕ ಜ್ಞಾನವನ್ನು ಕಲಿಸಲಾಗುತ್ತದೆ.
ತರಬೇತಿ ಪೂರ್ಣಗೊಳಿಸಿದ ಬಳಿಕ ಫಲಾನುಭವಿಗಳಿಗೆ
- ₹15,000 ಮೌಲ್ಯದ e-ವೌಚರ್ ನೀಡಲಾಗುತ್ತದೆ
- ಈ ಹಣದ ಮೂಲಕ ಆಧುನಿಕ ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಖರೀದಿಸಬಹುದು
- ಅಥವಾ ವೃತ್ತಿಗೆ ಅಗತ್ಯವಿರುವ ಇತರೆ ಟೂಲ್ ಕಿಟ್ ಪಡೆಯಬಹುದು
ನೀವು ಹೊಲಿಗೆ ಯಂತ್ರ ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸುವ ಸಮಯದಲ್ಲಿ Tailoring / Sewing Machine ವೃತ್ತಿಯನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ.
ಯೋಜನೆಯ ಪ್ರಯೋಜನಗಳು
ಈ ಯೋಜನೆಯ ಮೂಲಕ ಫಲಾನುಭವಿಗಳಿಗೆ ಸಿಗುವ ಲಾಭಗಳು:
- ಈಗ ಈ ಯೋಜನೆಯ ಮೂಲಕ ₹15,000 ವರೆಗೆ ಉಚಿತ ಟೂಲ್ ಕಿಟ್ ಸಹಾಯ.
- ಹಾಗೆ 7 ದಿನಗಳ ಉಚಿತ ಕೌಶಲ್ಯ ತರಬೇತಿ
- ಅನಂತರ ತರಬೇತಿ ಅವಧಿಯಲ್ಲಿ ಪ್ರತಿದಿನ ₹500 ಭತ್ಯೆ ನೀಡಲಾಗುತ್ತದೆ.
- ಒಟ್ಟು ₹3,500 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- ಹಾಗೆ ₹3 ಲಕ್ಷದವರೆಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ
- ಸ್ವಂತ ಉದ್ಯೋಗ ಆರಂಭಿಸಲು ಆರ್ಥಿಕ ಬೆಂಬಲ ನೀಡಲಾಗುತ್ತದೆ.
ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮಾನ್ಯ ಮೊಬೈಲ್ ಸಂಖ್ಯೆ
- ವೃತ್ತಿ ಪ್ರಮಾಣ ಪತ್ರ (ಇದ್ದರೆ ಉತ್ತಮ)
- ರೇಷನ್ ಕಾರ್ಡ್
- ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಹೇಗೆ?
ಈಗ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡುವ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇಲ್ಲವೇ ನಿಮ್ಮ ಹತ್ತಿರ ಇರುವ ಒಂಳೇನೇ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
LINK : Apply Now