Panchamitra Whatsapp Helpline: ಗ್ರಾಮ ಪಂಚಾಯತಿ ಕೆಲಸಗಳು ಇನ್ನು ಮುಂದೆ ಮೊಬೈಲಲ್ಲಿ! ಇಲ್ಲಿದೆ ನೋಡಿ ಮಾಹಿತಿ.

Panchamitra Whatsapp Helpline: ಗ್ರಾಮ ಪಂಚಾಯತಿ ಕೆಲಸಗಳು ಇನ್ನು ಮುಂದೆ ಮೊಬೈಲಲ್ಲಿ! ಇಲ್ಲಿದೆ ನೋಡಿ ಮಾಹಿತಿ.

ಈಗ ನೀವೇನಾದರೂ ಹಳ್ಳಿಗಳಲ್ಲಿ ವಾಸ ಮಾಡುತ್ತಾ ಇದ್ದೀರಾ ಈಗ ನೀವು ಯಾವುದಾದರೂ ಕೆಲಸಕ್ಕಾಗಿ ಪದೇಪದೇ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅಲೆದಾಡುತ್ತಾ ಇದ್ದೀರಾ. ಹಾಗಿದ್ದರೆ ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಇರುವಂತ ಪ್ರತಿಯೊಂದು ಸೌಲಭ್ಯಗಳು ಈಗ ನಿಮ್ಮ ಕೈಯಲ್ಲಿರುವ ಮೊಬೈಲ್ ನ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

Panchamitra Whatsapp Helpline

ಈಗ ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರವು ಪಂಚಮಿತ್ರ 2.0 ಎಂಬ ಕ್ರಾಂತಿಕಾರಿ ವ್ಯವಸ್ಥೆಯ ಅನ್ನು ಈಗ ಜಾರಿಗೆ ಮಾಡಿದ್ದು. ಈಗ ನೀವು ಕೇವಲ ವಾಟ್ಸಾಪ್ ಮೂಲಕ ಈಗ Hi ಎಂದು ಸಂದೇಶವನ್ನು ಕಳಿಸುವುದರ ಮೂಲಕ ಈಗ ನೀವು 39ಕ್ಕೂ ಹೆಚ್ಚು ಸೇವೆಗಳ ಮಾಹಿತಿಯನ್ನು ಈಗ ಅದರಲ್ಲಿ ಪಡೆದುಕೊಳ್ಳಬಹುದು.

ಹಾಗಿದ್ದರೆ ಸ್ನೇಹಿತರೆ ಈಗ ನೀವು ಮಾಹಿತಿಯನ್ನು ಪಡೆಯುವುದು  ಹೇಗೆ ಸಾಧ್ಯ ಹಾಗೂ ಯಾವ ನಂಬರಿಗೆ ಮೆಸೇಜ್ ಮಾಡಬೇಕೆಂದು ಚಿಂತಿಸುತ್ತಾ ಇದ್ದೀರಾ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಇದರಲ್ಲಿ ನೀಡಿರುವ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.

ಏನಿದು ಪಂಚಮಿತ್ರ 2.0

ಈಗ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತ್ ವ್ಯವಸ್ಥೆಯನ್ನು ಜನಸ್ನೇಹಿ ಮಾಡಲು ಈಗ ಒಂದು ಡಿಜಿಟಲ್ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ದೇಶದಲ್ಲಿ ಮೊದಲ ಬಾರಿಗೆ ನಮ್ಮ ಕರ್ನಾಟಕ ಇಂತಹ ಸುಧಾರಿತ ವ್ಯವಸ್ಥೆಯನ್ನು ಈಗ ಜಾರಿಗೆ ಮಾಡಿದ್ದು. ಇದರ ಮೂಲಕ ನಾಗರಿಕರು ಈಗ ದೂರುಗಳನ್ನು ಕೂಡ ನೀಡಲು ಇದು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಈ ಒಂದು ಮೊಬೈಲ್ ನಂಬರ್ ನ ಮೂಲಕ ಈಗ ನೀವು ಯಾವೆಲ್ಲ  ಸೌಲಭ್ಯಗಳು ಈಗ ನಮ್ಮ ಪಂಚಾಯಿತಿಗಳಲ್ಲಿ ಇವೆ ಎಂಬುದರ ಬಗ್ಗೆ ಮಾಹಿತಿ ಹಾಗೂ ಯಾವೆಲ್ಲ ಲಾಭಗಳನ್ನು ಅಂದರೆ ಯೋಜನೆಗಳ ಬಗ್ಗೆ ಯಾರೆಲ್ಲ ಮಾಹಿತಿಯನ್ನು  ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಈಗ ಮೊಬೈಲ ಮೂಲಕ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ಈ ಪ್ರತಿ ಒಂದು ಯೋಜನೆಗಳ ಮೂಲಕ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಂದರೆ ಯಾವೆಲ್ಲ ಯೋಜನೆಗಳಿಗೆ ಎಷ್ಟು ಹಣ ಖರ್ಚಾಗಿದೆ ಮತ್ತು ಪಂಚಾಯತ್ ಸಭೆಯ ನಿರ್ಣಯಗಳನ್ನು ಕೂಡ ನೀವು ಅದರಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಪಂಚಮಿತ್ರ ವಾಟ್ಸಪ್ ಬಳಕೆ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಸೇವೆಯನ್ನು ಈಗ ಯಾವ ರೀತಿಯಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬೇಕು ಎಂಬುದನ್ನು ಈಗ ನೀವು ಪಡೆದು ಮಾಹಿತಿ ಪಡೆದುಕೊಳ್ಳಬೇಕಾ. ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಮಾಹಿತಿ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಮೊದಲು ಸ್ನೇಹಿತರೆ ನೀವು ಕೂಡ ನಿಮ್ಮ ಮೊಬೈಲ್ ಫೋನಿನಲ್ಲಿ ನಾವು ಈ ಕೆಳಗೆ ನೀಡಿರುವ ಈ ಒಂದು ಪಂಚಮಿತ್ರ ಸಹಾಯವಾಣಿ ಸಂಖ್ಯೆಯನ್ನು ಮೊದಲಿಗೆ ಸೇವೆ ಮಾಡಿಕೊಳ್ಳಬೇಕಾಗುತ್ತದೆ.

Mobile Number : 8277506000 

ತದನಂತರ ನೀವು ನಿಮ್ಮ ಮೊಬೈಲ್ ಮೊಬೈಲ್ ಫೋನಿನಲ್ಲಿ ವಾಟ್ಸಾಪ್ ಓಪನ್ ಮಾಡಿಕೊಂಡು. ಈಗ ನೀವು ಸೇವ್ ಮಾಡಿಕೊಂಡಿರುವಂತ ಈ ಒಂದು ನಂಬರಿಗೆ Hi ಎಂದು ಮೆಸೇಜ್ ಅನ್ನು ಕಳುಹಿಸಬೇಕಾಗುತ್ತದೆ.

ಆನಂತರ ಸ್ನೇಹಿತರೆ ತಕ್ಷಣ ನಿಮಗೆ ಅದರಲ್ಲಿ ಒಂದು ಮರು ಸಂದೇಶ ಬರುತ್ತದೆ. ಅಲ್ಲಿ ನೀವು ನಿಮಗೆ ಬೇಕಾದಂತಹ ಅಂದರೆ ಅನುಕೂಲಕ್ಕೆ ತಕ್ಕಂತೆ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಆನಂತರ ನೀವು ಅದರಲ್ಲಿ ನಿಮ್ಮ ಆಯ್ಕೆ ಭಾಷೆಯನ್ನು ಆಯ್ಕೆ ಮಾಡಿಕೊಂಡ. ನಂತರ ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ತದನಂತರ ಅದರಲ್ಲಿ ನಿಮಗೆ ಸೇವೆಗಳ ಮಾಹಿತಿ ಅಥವಾ ಕುಂದು ಕೊರತೆ ಎಂಬ ಆಯ್ಕೆಗಳು ದೊರೆಯುತ್ತವೆ. ಅದರಲ್ಲಿ ನಿಮಗೆ ಬೇಕಾದಂತಹ ಸೇವೆಗಳ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳುವುದರ ಮೂಲಕ ಪ್ರತಿಯೊಂದು ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.

ಯಾವೆಲ್ಲ ಸೇವೆಗಳು ಲಭ್ಯ!

ಈಗ ನೀವು ಈ ಒಂದು ವಾಟ್ಸಾಪ್ ನಂಬರ್ ನ ಮೂಲಕ ಈಗ ಒಟ್ಟಾರೆಯಾಗಿ 39 ಬಗೆಯ ಹೊಸ ಹೊಸ ಮಾಹಿತಿಗಳನ್ನು ಅಂದರೆ ಗ್ರಾಮ ಪಂಚಾಯಿತಿಯ ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಅಂದರೆ ಸ್ನೇಹಿತರೆ ಈಗ ನೀವು ಏನಾದರೂ ಹೊಸ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದುಕೊಂಡಿದ್ದರು. ಅದಕ್ಕೂ ಕೂಡ ಪರವಾನಿಗೆ ಪಡೆಯಲು ಮತ್ತು ಅರ್ಜಿ ಸ್ಥಿತಿಗೆ ತಿಳಿಯಲು ಕೂಡ ಇದನ್ನು ಬಳಕೆ ಮಾಡಿಕೊಳ್ಳಬಹುದು. ಆನಂತರ ಹೊಸ ನೀರಿನ ಸಂಪರ್ಕ ಅಥವಾ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಕೂಡ ದೂರನ್ನು ಸಲ್ಲಿಕೆ ಮಾಡಬಹುದು.

ಆನಂತರ ನಿಮ್ಮ ಓಣಿಯಲ್ಲಿ ಬೀದಿ ದೀಪ ಉರಿಯದೆ ಇದ್ದರೆ ಅದನ್ನು ಕೂಡ ನೀವು ದೂರನ್ನು ಸಲ್ಲಿಕೆ ಮಾಡಿಕೊಳ್ಳಬಹುದು. ಆನಂತರ ನಿಮ್ಮ ಜಾಬ್ ಕಾರ್ಡ್ ಪಡೆಯುವುದು ಮತ್ತು ಕೆಲಸದ ಬೇಡಿಕೆಯ ಸಲ್ಲಿಕೆ ಕೂಡ ಅದರಲ್ಲಿ ನೀವು ಮಾಡಬಹುದಾಗಿದೆ.

ಆನಂತರ ನೀವು ಅದರಲ್ಲಿ ಯೋಜನೆಗಳಿಗೆ ನೀಡಿದ ದಾಖಲೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಹಾಗೂ ಗ್ರಾಮದ ಸ್ವಚ್ಛತೆ ಮತ್ತು ರಸ್ತೆ ಸಮಸ್ಯೆಗಳ ಬಗ್ಗೆ ಕೂಡ ಮಾಹಿತಿಗಳನ್ನು ಅದರಲ್ಲಿ ಹಂಚಿಕೊಳ್ಳ ಬಹುದು.

ಅದೇ ರೀತಿಯಾಗಿ ನೀವು ಈ ಒಂದು ನಂಬರಿಗೆ ಕರೆಯನ್ನು ಮಾಡುವುದರ ಮೂಲಕ ನೇರವಾಗಿ ಅಧಿಕಾರಿಗಳೊಂದಿಗೆ ಮಾತನಾಡಿಕೊಂಡು ಕೂಡ ನೀವು ಈಗ ನಿಮಗೆ ಯಾವೆಲ್ಲ ಸೌಲಭ್ಯಗಳು ಬೇಕು ಮತ್ತು ಏನೆಲ್ಲ ಕುಂದು ಕೊರತೆಗಳ ಬಗ್ಗೆ ನೀವು ಮಾಹಿತಿಯನ್ನು ನೀಡಬೇಕು ಎಂದುಕೊಂಡಿದ್ದೀರ. ಆ ಒಂದು ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳೊಂದಿಗೆ ಮಾತನಾಡಿಕೊಂಡು ಬಗೆಹರಿಸಿಕೊಳ್ಳಬಹುದಾಗಿದೆ.

ಅಷ್ಟೇ ಅಲ್ಲದೆ ಈಗ ನೀವು ಈ ಒಂದು ಪಂಚಮಿತ್ರ ಪೋರ್ಟಲ್  ಮತ್ತೊಂದು ವಿಶೇಷವೂ ಏನೆಂದರೆ ಈಗ ವೆಬ್  ಕಾಸ್ಟಿಂಗ್ ಮೂಲಕ  ಪಂಚಾಯತಿಯಲ್ಲಿ ನಡೆಯುವಂತಹ ಸಭೆಗಳಲ್ಲಿ ಏನೆಲ್ಲ ಚರ್ಚೆಗಳು ಆಗುತ್ತವೆ ಎಂಬುದನ್ನು ಕೂಡ ನೀವು ಮನೆಯಲ್ಲಿ ಕುಳಿತುಕೊಂಡು ನೇರವಾಗಿ ವೀಕ್ಷಣೆ ಮಾಡಬಹುದು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗುತ್ತಾ ಇದ್ದು. ಭ್ರಷ್ಟಾಚಾರಕ್ಕೆ ತಡೆ ಹಾಕಲು  ಇದು ಸಹಾಯ ಮಾಡುತ್ತದೆ. ಹಾಗೆ ಈಗ ತಂತ್ರಜ್ಞಾನ ಬೆಳೆದಂತೆ ಸರ್ಕಾರಿ ಸೇವೆಗಳು ನಮ್ಮ ಮನೆಯ ಬಾಗಿಲಿಗೆ ಬರುತ್ತಾ ಇದ್ದು. ಪಂಚಾಯಿತಿ ಕಚೇರಿಯ ಮುಂದೆ ಈಗ ಸಾಲುಗಟ್ಟಿ ನಿಲ್ಲುವ ಬದಲಾಗಿ ಈಗ ನೀವು ವಾಟ್ಸಪ್ ಮೂಲಕ ಎಲ್ಲಾ ತರದ ಸೌಲಭ್ಯಗಳು ಹಾಗೂ ಏನಾದರೂ ತಪ್ಪುಗಳ ಬಗ್ಗೆ ಮಾಹಿತಿ ಕೊಡಬೇಕೆಂದರೆ ಒಂದು ಒಳ್ಳೆಯ ಅನುಕೂಲ ಎಂದು ಹೇಳಬಹುದು.

ಒಟ್ಟಾರೆಯಾಗಿ ಈಗ ನೀವು ನಿಮ್ಮ ಈ ಒಂದು ಮೊಬೈಲ್ ನಂಬರ್ ನ ಮೂಲಕ Hi ಎಂಬುದನ್ನು ಕಳಿಸುವುದರ ಮೂಲಕ ನಿಮ್ಮ ಪಂಚಾಯಿತಿಯಲ್ಲಿ ದಿನನಿತ್ಯ ನಡೆಯುವಂತ ಪ್ರತಿಯೊಂದು ಮಾಹಿತಿಗಳು ಹಾಗೂ ಯಾವೆಲ್ಲ ಸೌಲಭ್ಯಗಳಿವೆ ಎಂಬುದರ ಬಗ್ಗೆ ಈಗ ನೀವು ಸಂಪೂರ್ಣವಾದಂತಹ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಈ ಒಂದು ಲೇಖನದಲ್ಲಿ ನೀಡುವ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Leave a Comment