Airtel New Recharge Plan 2026: ಕೇವಲ ₹469ಕ್ಕೆ 84 ದಿನ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ,
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಈ ಸುದ್ದಿ ನಿಮ್ಮಿಗಾಗಿ ಖಂಡಿತ ಖುಷಿ ನೀಡುವಂತದ್ದು. ದಿನದಿಂದ ದಿನಕ್ಕೆ ಮೊಬೈಲ್ ರಿಚಾರ್ಜ್ ದರಗಳು ಏರುತ್ತಿರುವ ಈ ಸಮಯದಲ್ಲಿ, ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.

ಹೌದು ಸ್ನೇಹಿತರೆ, ಈಗ ಕೇವಲ ₹469 ರೂಪಾಯಿಗೆ 84 ದಿನಗಳವರೆಗೆ ವ್ಯಾಲಿಡಿಟಿ ಇರುವ Airtel New Recharge Plan 2026 ಲಭ್ಯವಿದೆ. ಈ ಲೇಖನದಲ್ಲಿ ಈ ಯೋಜನೆಯ ಸಂಪೂರ್ಣ ವಿವರ, ಲಾಭಗಳು, ಯಾರಿಗೆ ಇದು ಸೂಕ್ತ ಮತ್ತು ರಿಚಾರ್ಜ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಸರಳವಾಗಿ ತಿಳಿಸಿಕೊಡಲಾಗುತ್ತದೆ. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿ.
ಏರ್ಟೆಲ್ ಟೆಲಿಕಾಂ ಸಂಸ್ಥೆಯ ಮಾಹಿತಿ
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಏರ್ಟೆಲ್ ಒಂದಾಗಿದೆ. ನಗರದಿಂದ ಹಳ್ಳಿವರೆಗೂ ವ್ಯಾಪಕ ನೆಟ್‌ವರ್ಕ್ ಹೊಂದಿರುವ ಏರ್ಟೆಲ್,2G,3G,4G,5G ಸೇವೆಗಳನ್ನು ಇನ್ನೂ ಕೂಡ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಕೀಪ್ಯಾಡ್ ಮೊಬೈಲ್ ಬಳಕೆದಾರರು ಮತ್ತು ಹಿರಿಯ ನಾಗರಿಕರು ಹೆಚ್ಚು ಏರ್ಟೆಲ್ ಸೇವೆಗಳನ್ನು ಬಳಸುತ್ತಿರುವುದನ್ನು ಕಾಣಬಹುದು.
ಇಂತಹ ಗ್ರಾಹಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಏರ್ಟೆಲ್ ಈಗ ಕರೆ ಮಾತ್ರ ಬೇಕಾದವರಿಗೆ ಅನುಕೂಲಕರವಾದ ದೀರ್ಘಾವಧಿ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.
₹469ಕ್ಕೆ 84 ದಿನ ವ್ಯಾಲಿಡಿಟಿ
ಈ ಹೊಸ ಏರ್ಟೆಲ್ ರಿಚಾರ್ಜ್ ಪ್ಲಾನ್ ಸಂಪೂರ್ಣವಾಗಿ ವ್ಯಾಲಿಡಿಟಿ + ಕರೆ ಮೇಲೆ ಕೇಂದ್ರೀಕರಿಸಲಾಗಿದೆ. ಡೇಟಾ ಬಳಸದವರಿಗೆ ಇದು ಅತ್ಯಂತ ಲಾಭದಾಯಕ ಯೋಜನೆ ಎನ್ನಬಹುದು.
ಈ ₹469 ರಿಚಾರ್ಜ್ ಪ್ಲಾನ್‌ನಲ್ಲಿ ನಿಮಗೆ ದೊರೆಯುವ ಸೌಲಭ್ಯಗಳು:
- 84 ದಿನಗಳ ಪೂರ್ಣ ವ್ಯಾಲಿಡಿಟಿ
- ಯಾವುದೇ ನೆಟ್ವರ್ಕ್‌ಗೆ ಅನ್ಲಿಮಿಟೆಡ್ ಕರೆಗಳು
- ಒಟ್ಟು 900 SMS ಉಚಿತ
- Airtel Free Hello Tunes ಸೌಲಭ್ಯ
- ಯಾವುದೇ ಇಂಟರ್ನೆಟ್ ಡೇಟಾ ಇಲ್ಲ
ಅಂದರೆ ದಿನಕ್ಕೆ ಲೆಕ್ಕ ಹಾಕಿದರೆ ₹6ಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ನೀವು ಏರ್ಟೆಲ್ ಸೇವೆಗಳನ್ನು ಬಳಸಬಹುದು.
ಈ ಪ್ಲಾನ್ ನ ವಿಶೇಷತೆ ಏನು?
ಇಂದಿನ ದಿನಗಳಲ್ಲಿ 84 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್‌ಗಳು ಸಾಮಾನ್ಯವಾಗಿ ₹799 ಅಥವಾ ಅದಕ್ಕಿಂತ ಹೆಚ್ಚು ಬೆಲೆಯಿಂದಲೇ ಆರಂಭವಾಗುತ್ತವೆ. ಆದರೆ ಏರ್ಟೆಲ್ ಈ ಪ್ಲಾನ್ ಮೂಲಕ ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯವನ್ನು ನೀಡುತ್ತಿದೆ.
ಈ ಪ್ಲಾನ್‌ನಿಂದ ಗ್ರಾಹಕರು
- ತಿಂಗಳಿಗೆ ₹100 ರಿಂದ ₹200 ವರೆಗೆ ಹಣ ಉಳಿಸಬಹುದು
- ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಬೇರೆ ಬೇರೆ ರಿಚಾರ್ಜ್ ಮಾಡುವ ಅಗತ್ಯವಿಲ್ಲ
- ಕರೆಗಳಿಗೆ ಯಾವುದೇ ಮಿತಿ ಇಲ್ಲ
ಈ ರಿಚಾರ್ಜ್ ಪ್ಲಾನ್ ಯಾರಿಗೆ ಸೂಕ್ತ?
ಈ Airtel New Recharge Plan 2026 ಎಲ್ಲರಿಗೂ ಅಲ್ಲ, ಆದರೆ ಕೆಲವು ಗ್ರಾಹಕರಿಗೆ ಅತ್ಯಂತ ಸೂಕ್ತವಾಗಿದೆ.
ಈ ಪ್ಲಾನ್ ವಿಶೇಷವಾಗಿ ಸೂಕ್ತವಾಗಿರುವವರು
- ಕೀಪ್ಯಾಡ್ ಮೊಬೈಲ್ ಬಳಕೆದಾರರು
- ಹಿರಿಯ ನಾಗರಿಕರು
- ಡೇಟಾ ಬಳಸದವರು
- ಎರಡು ಸಿಮ್ ಬಳಸುವವರು (ಒಂದು ಕರೆಗಾಗಿ ಮಾತ್ರ)
- ಕಡಿಮೆ ಖರ್ಚಿನಲ್ಲಿ ದೀರ್ಘಾವಧಿ ವ್ಯಾಲಿಡಿಟಿ ಬೇಕಾದವರು
ಒಂದು ವೇಳೆ ನಿಮಗೆ ಇಂಟರ್ನೆಟ್ ಅಗತ್ಯವಿದ್ದರೆ, ಈ ಪ್ಲಾನ್ ನಿಮ್ಮಿಗೆ ಸೂಕ್ತವಾಗುವುದಿಲ್ಲ.
ಡೇಟಾ ಬೇಕಾದವರಿಗೆ Airtel Recharge Plans
ಡೇಟಾ ಬಳಕೆದಾರರಿಗಾಗಿ ಏರ್ಟೆಲ್ ಇನ್ನೂ ಹಲವು ಪ್ಲಾನ್‌ಗಳನ್ನು ನೀಡುತ್ತಿದೆ. ಉದಾಹರಣೆಗೆ:
-
₹799 ರಿಚಾರ್ಜ್ ಪ್ಲಾನ್
- ಪ್ರತಿದಿನ 1.5GB ಡೇಟಾ
- 77 ದಿನಗಳ ವ್ಯಾಲಿಡಿಟಿ
- ಅನ್ಲಿಮಿಟೆಡ್ ಕರೆಗಳು
- ಪ್ರತಿದಿನ 100 SMS
-
₹859 ರಿಚಾರ್ಜ್ ಪ್ಲಾನ್
- ಪ್ರತಿದಿನ 1.5GB ಡೇಟಾ
- 84 ದಿನಗಳ ವ್ಯಾಲಿಡಿಟಿ
- ಅನ್ಲಿಮಿಟೆಡ್ ಕರೆಗಳು
- ಪ್ರತಿದಿನ 100 SMS
ಇನ್ನಷ್ಟು ಪ್ಲಾನ್‌ಗಳಿಗಾಗಿ Airtel Thanks App ಪರಿಶೀಲಿಸಬಹುದು.
ರಿಚಾರ್ಜ್ ಮಾಡುವುದು ಹೇಗೆ?
ಈ ರಿಚಾರ್ಜ್ ಪ್ಲಾನ್ ಅನ್ನು ಮಾಡಿಕೊಳ್ಳುವುದು ತುಂಬಾ ಸುಲಭ. ಈಗ PhonePe, Google Pay, Paytm ಇತರೆ ಯಾವುದೇ UPI ಅಪ್ಲಿಕೇಶನ್ ಮೂಲಕ ನೀವು ರಿಚಾರ್ಜ್ ಮಾಡಿಕೊಳ್ಳಬಹುದು ಮತ್ತು Airtel Thanks App ತೆರೆಯಿರಿ. ಅನಂತರ Recharge ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ₹469 ಪ್ಲಾನ್ ಆಯ್ಕೆ ಮಾಡಿ ಪೇಮೆಂಟ್ ಮಾಡಿ.